ಬುಧವಾರ, ಜೂನ್ 10, 2015

ಸಂಘದಲ್ಲಿ ದೇಶ-ವಿಭಜನೆಯನ್ನು ಹೇಳಿಕೊಡುತ್ತಾರೆ ಎಂಬ ಮುರ್ಖವಾದಕ್ಕೆ ಇಲ್ಲಿದೆ ಪ್ರೀತಿಯ ಪ್ರತ್ಯುತ್ತರ..

ದಿನಾಂಕ: 10/06/2015 - ಬೆಳಗಾವಿ ದಕ್ಷಿಣ

ಈ ವಿಷಯ ತಮಗೆ ತಿಳಿಸಲು ಹರ್ಷವಾಗುತ್ತದೆ.  ಕರ್ನಾಟಕದ, ಬೆಳಗಾವಿಯಲ್ಲಿ, ರಾಷ್ಠ್ರೀಯ ಸ್ವಯಂ ಸೇವಕ ಸಂಘದ ಘೋಷ ವರ್ಗ ನಡೆಯಿತು, ಈ ತರಹದ ವರ್ಗಗಳು ಅನೇಕವಾಗಿ ನಡೆಯುತ್ತವೆ. ಆದರೆ ನಾನು ಸ್ವತ: ಅನುಭವಿಸಿದ ನಂತರ ಬೆರೆಯಲೇಬೇಕೆಂದೆನಿಸಿದ ವಿಷಯವಿದು.

ದಿನಾಂಕ 5, 6 ಮತ್ತು 7 ರಂದು ಸಂಘದ ಘೋಷ ವರ್ಗ ನಡೆಯಿತು, ಸಂಘದಲ್ಲಿ ಅನೇಕ ದೇಶ ಕಟ್ಟುವ ವಿಷಯಗಳನ್ನು ಹೇಳಿಕೊಡುವುದರ ಜೊತೆಗೆ ಸಂಗೀತ ವಿದ್ಯೆಯನ್ನು ಉಣಬಡಿಸಲಾಯಿತು. ಈ ಮೂರು ದಿನಗ¼ಲ್ಲಿ ಮನುಷ್ಯನನ್ನು ಮನುಷ್ಯನನ್ನಾಗಿಸುವ ಪ್ರಯತ್ನ ನಡೆಯಿತು. ಜಿಲ್ಲಾ ಘೋಷ ಪ್ರಮುಖರಾದ ಪೂಜನೀಯ ಶ್ರೀ ರವಿ ಕಾರೇಕರ, ಹಿರಿಯ ಪ್ರಚಾರಕರಾದ ಪೂಜನೀಯ ಶ್ರೀ. ಹರಿಭಾವು ವಝೆ, ಪೂಜನೀಯ ಶ್ರೀ. ಸುಧೀರ ಗಾಡಗೀಳ್, ಪೂಜನೀಯ ಶ್ರೀ. ಪರಮೇಶ್ವರ ಹೆಗಡೆ ಅವರ ನೇತೃತ್ವದಲ್ಲಿ ಜನ ಕಲ್ಯಾಣ ಟ್ರಸ್ಠ ನ ಸಂತ ಮೀರಾ ಶಾಲೆಯಲ್ಲಿ ಸಾಂಗವಾಗಿ ಜರುಗಿತು. ಬೆಳಗಾವಿ ನಗರ, ಗ್ರಾಮಾಂತರ, ಬೆಳಗಾವಿ ಜಿಲ್ಲೆಯ ಅನೇಕ ತಾಲೂಕು ಗ್ರಾಮಗಳಿಂದ ಅನೇಕ ಸ್ವಯಂ ಸೇವಕರು ಭಾಗವಹಿಸಿದರು.

ಸಾ..ರೇ..ಗ..ಮ..ಪ..ಧ..ನೀ.. ಸಪ್ತ ಸ್ವರಗಳು ಮನುಷ್ಯನ ಜೀವನದಲ್ಲಿ ಅತ್ಯಂತ ಪ್ರಮುಖ ಪಾತ್ರ ವಿಹಿಸುವುದರ ಜೊತೆಗೆ ಮನುಷ್ಯನ ಬಾಳನ್ನು ಸಂಗೀತಮಯವನ್ನಾಗಿಸುತ್ತದೆ. ನನಗೆ ಅನಿಸಿದ್ದೇನೆಂದರೆ ಮನುಷ್ಯನ ಜೀವನದಲ್ಲಿ ಸ್ವರ..ಲಯ..ತಾಳ ಗಳಿಲ್ಲದಿದ್ದರೆ ಬಾಳು ಬೋರ್ಗಲ್ಲಿನಂತೆಯೆ ಸರಿ.

ನನ್ನ ಜೇವನದಲ್ಲಿ ಯಾವುದಾದರೊಂದು ಸಂಗೀತ ವಾದ್ಯ ವನ್ನು ಕಲಿಯಲೇಬೇಕೆಂಬ ಆಸೆ ಮನೆಮಾಡಿತ್ತು. ಕೆಲಸದ ವತ್ತಡದಲ್ಲಿ ಆಸೆ ಕನಸಾಗಿ ಉಳಿದುಕೊಂಡಿತ್ತು. ಪ್ರತಿ ವರ್ಷದಂತೆ ಈ ವರ್ಷವೂ ನನ್ನ ಜೀವನದಲ್ಲಿ ಅನೇಕ ಕಾರ್ಯ ತಂತ್ರಗಳನ್ನು ರೂಪಿಸಿಕೊಂಡೆ (New Year Resolutions), ಅದರಲ್ಲಿ ಸಂಗೀತಕ್ಕೂ ಒಂದು ಸ್ಥಾನ ಕೊಟ್ಟೆ , ಆಯಿತು, ಇನ್ನು ಕಲಿಯೋಣವೆಂದು ಗುರುಗಳನ್ನು ಹುಡುಕಿಕೊಂಡು ಹೊರಟೆ, ಸಾಕಷ್ಟು ಪರಿಶ್ರಮದ ನಂತರ ನನಗೆ ತಿಳಿದಿದ್ದೆನೆಂದರೆ, ನಮ್ಮ ನಗರದ ಇನ್ನೊಂದು ಶಾಖೆಯಲ್ಲಿ ಸಂಗೀತ ವನ್ನು ಹೇಳಿಕೊಡಲಾಗುತ್ತದೆ ಯೆಂದು. ಆಗ ನನಗೆ, ‘ಒಂದು ಹಕ್ಕಿಗೆ ರೆಕ್ಕೆ ಸಿಕ್ಕಿದರ ಅನುಭವ’.

ರವಿ ಕಾರೆಕರ ಅಂತಹ ಸುಹೃದಯಿಗಳು ನನಗೆ ಸಂಗೀತ ಕಲಿಸಲು ಮುಂದಾದರು. ಹಿರಿಯರು ಹೇಳುತ್ತಾರಲ್ಲ, “ ಉದ್ದೇಶ ಒಳ್ಳೆಯದಿದ್ದರೆ ನಮಗೆ ಒಳ್ಳೆಯದಾಗುತ್ತದೆ”, ಎಂಬ ಮಾತಿಗೆ ಬಲ ಬಂದಂತಾಯಿತು. ಈ ಮೂರು ದಿನಗಳಲ್ಲಿ ಸಿಕ್ಕ ಅನುಭವ ಅತ್ಯಂತ ಹರುಷದಾಯಕ, ಮುಂದೆ ಇನ್ನು ಸಾಧಿಸಬೇಕೆಂಬ ಬಲ ಬಂತು.

ಇರಲಿ, ಇಲ್ಲಿ ಗಮನಿಸಬೇಕಾದ ಅಂಶವೆಂದರೆ ನನ್ನ ತರಹ ಅನೇಕ ಸಂಗೀತಾಸಕ್ತರು, ಉತ್ಸಾಹಿ, ಅನುಭವಿ ಕಲಾಪ್ರೇಮಿ, ಬಾಲಕರು,  ಯುವಕರು, ವೃಧ್ಧರು ಒಟ್ಟಿಗೆ ಸೇರಿದ್ದರು, 40 ಪಣವವಾದಕರು (Drummers), 60 ವಂಶಿ (Flute), 15 ಶಂಖ (Bugle), 1 ಝಲ್ಲರಿ ವಾದಕರು ಸೇರಿ ತಮ್ಮ ಅನುಭವವನ್ನು ಪಸ್ತುತ ಪಡಿಸಿದರು. ಪ್ರಾರಂಭದಲ್ಲಿಯೆ ನಾನು ನನಗೆ ಗೊತ್ತಿಲ್ಲದೆಯ ವಂಶಿಯ 9 ಪ್ರಾಥಮಿಕ ಪಾಠಗಳನ್ನು ಕಲಿತದ್ದು ಅಚ್ಚರಿ ಮೂಡಿಸಿತು. ಸಂಗೀತ ಕ್ಷೇತ್ರದಲ್ಲಿ ನನ್ನ ಸಾಮಥ್ರ್ಯದ ಬಗ್ಗೆ  ಅರಿವು ಮೂಡಿಸಲು ಸಂಘ ಕೆಲಸ ಮಾಡಿದೆ ಎಂದರೆ ತಪ್ಪಾಗಲಾರದು.

ಕೆಲಸವಿಲ್ಲದ ಯುವಕರು ಸಂಗೀತವನ್ನು ಕಲಿತು ತಮ್ಮ ಜೀವನವನ್ನು ರೂಪಿಸಕೊಳ್ಳಬಹುದು. ನಿಮ್ಮ ಜೀವನದಲ್ಲಿ ಇದು ಒಂದು ಆಶಾಕಿರಣವಾಗಬಹುದು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಸಂಗೀತ ವಿದ್ಯೆ ಹೇಳಿಕೊಡುವವರು ಯಾವುದೆ ತರಹದ ಅಪೇಕ್ಷೆ ಇಲ್ಲದೆ ಸೇವೆ ಮಾಡುತ್ತಾರೆ. ಬನ್ನಿ ನೀವು ಸಹ ಹೊಸದೊಂದನ್ನು ಕಲಿಯಲು ಇಚ್ಛಿಸಿದ್ದರೆ, ರಾಷ್ಠ್ರೀಯ ಸ್ವಯಂ ಸೇವಕ ಸಂಘ ನಿಮಗೆ ಒಂದು ಮಾಧ್ಯಮವನ್ನು (ಠಿಟಚಿಣಜಿoಡಿm) ಕಲ್ಪಿಸುತ್ತದೆ. ಅನೇಕ ಯುವಕರು ಶಿಕ್ಷಣ ಕ್ಷೇತ್ರದಲ್ಲಿ  ಸಫಲವಾಗದೆ ಇರುವವರು  ಆತ್ಮಹತ್ಯ ಮಾಡಿಕೊಳ್ಳದೆಯೆ, ಈ ಒಂದು ಸನ್ಮಾರ್ಗಕ್ಕೆ ಬಂದರೆ ನಿಮ್ಮ ಬಾಳು ಸಾರ್ಥಕ. ದೇಶದ ಅಭಿವೃಧ್ಧೀ ಕೆಲಸದಲಿ ಕೈ-ಜೋಡಿಸಬಹುದು.

ಈ ಮೂರು ದಿನಗಳಲ್ಲಿ ನಾನು, ಸಂಗೀತ, ಯೋಗ, ಸಾಂಸ್ಕತಿಕ, ಬೌಧ್ಧಿಕ, ಚರ್ಚೆಗಳಲ್ಲಿ ಭಾಗವಹಿಸಿದೆ. ಪ್ರತಿನಿತ್ಯ 13 ಸೂರ್ಯನಮಸ್ಕಾರಗಳ ಜೊತೆಗೆ ರುಚಿರುಚಿಯಾದ ಉಪಹಾರ – ಊಟ – ಸವಿಯುವುದರ ಜೊತೆಗೆ, ಹತ್ತು ಹಲವಾರು ಕೆಲಸಗಳಲ್ಲಿ ನನ್ನಷ್ಠಕ್ಕೆ ನಾನು ತೊಡಗಿಸಕೊಂಡೆ. ಇದರಿಂದಾದ ಲಾಭಗಳು ಬಹಳ. ಹೊಸ ವಿಷಯ ಕಲಿತೆ, ಹೊಸ ಜನರೊಡನೆ ಬೆರೆತೆ, ದೇಶದ ಬಗ್ಗೆ ಚಿಂತನೆಯನ್ನು ಮಾಡುವುದರ ಜೊತೆಗೆ, ನಾವಿರುವ ಸ್ಧಾನವನ್ನು ಶುಚಿಯಾಗಿಟ್ಟುಕೊಳ್ಳುವುದು ಹೇಗೆ ಎಂಬ ವಿಷಯ ಕಲಿತೆ. ನಾನು ದೇಶಕ್ಕಾಗಿ ಏನು ಮಾಡಬಹುದೆಂಬುದನು ಅರಿತೆ. ಇದಕ್ಕೆ ನಾನು ಕೊಟ್ಟ ಶುಲ್ಕ ಅತ್ಯಂತ ಕಡಿಮೆ.

ವಿಲಾಸಿ ತಂದೆ – ತಾಯಂದಿರಲ್ಲಿ  ಒಂದು ವಿನಂತಿ, ತಾವು ತಮ್ಮ ಮಕ್ಕಳ ಭವಿಶ್ಯ ರೂಪಿಸಬೇಕೆಂದರೆ ಇಂದೇ ತಮ್ಮ ಮಕ್ಕಳನ್ನು ಹತ್ತಿರದ ರಾಷ್ಠ್ರೀಯ ಸ್ವಯಂ ಸೇವಕ ಸಂಘದ ಶಾಖೆಗೆ ಸೇರಿಸಿ, ಬೆಳಿಗ್ಗೆ ಅಥವಾ ಸಾಯಂಕಾಲ ಕೇವಲ 1 ಘಂಟೆ ಕೊಡುವುದರ ಜೊತೆಗೆ, ದೇಶ ಕಟ್ಟುವ ಪ್ರಯತ್ನದಲಿ ಭಾಗಿಯಾಗಿ, ಸುಂದರವಾದ ಹಿಂದು ಸಮಾಜವನ್ನು ಕಟ್ಟುವುದರ ಜೊತೆಗೆ ಬಲಿಷ್ಠ ಸಮಾಜವನ್ನು ಕಟ್ಟೋಣ.

For Feedback, contact;

ಲೇಖಕ – ಆಮಿತ ವಿಶ್ವನಾಥ ಕುಲಕರ್ಣಿ, ಚಿದಂಬರ ನಗರ, ಬೆಳಗಾವಿ
ದೂರವಾಣಿ – 9972591014
ಈ-ಮೇಲ - kulkarni.amith@gmail.com